ಬೆಂಗಳೂರು : ಬಿಜೆಪಿ ಶಾಸಕ ಯಡಿಯೂರಪ್ಪ ಆಪ್ತ ಮಾಡಾಳ್ ವಿರೂಪಾಕ್ಷಪ್ಪ ಮಗನ ಮನೆಯಲ್ಲಿ 8 ಕೋಟಿ ಸಿಕ್ಕಿದೆ. ಹಾಗಾದರೆ ಎಷ್ಟು ಪ್ರಮಾಣದಲ್ಲಿ ಲಂಚ ಹೊಡೆದಿರಬಹುದು. ಇವಾಗ 40% ಕಮಿಷನ್ ಸಾಬೀತು ಆಗಿದೆ. ಸಿಎಂ ಬೊಮ್ಮಾಯಿಗೆ ನೈತಿಕತೆ ಇದ್ದರೆ ಕೂಡಲೇ ರಾಜೀನಾಮೆ ನೀಡಿ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿದ ಅವರು, ಇದು 40% ಕಮಿಷನ್ ಸರ್ಕಾರ ಎಂದು ಸಾಬೀತಾಗಿದೆ. ಇನ್ನೇನು ದಾಖಲೆಗಳು ಬೇಕು ಎಂದು ಪ್ರಶ್ನಿಸಿದರು.