ದುಬಾರಿ ವಾಚ್ ಪ್ರಕರಣದಿಂದ ಸಿಎಂ ಸಿದ್ದರಾಮಯ್ಯ ಅಕ್ಷರಶಃ ಹೈರಾಣಾಗಿದ್ದಾರೆ. ಯಾರಾದರೂ ಗಿಫ್ಟ್ ಕೊಡೋಕೆ ಬಂದರೆ ಬೇಡಪ್ಪಾ ಗಿಫ್ಟ್ ಸಹವಾಸ ಅನ್ನುತ್ತಿದ್ದಾರೆ. ಕಲಬುರಗಿಯಲ್ಲಿ ಇದೇ ರೀತಿಯ ಪ್ರಸಂಗ ನಡೆದಿದೆ. ಉತ್ತಮ ಬಜೆಟ್ ಮಂಡಿಸಿದ್ದಕ್ಕಾಗಿ ಬಂಗಾರದ ಪದಕ ನೀಡಲು ಮುಂದಾಗಿದ್ದ ಗುಲ್ಬರ್ಗಾ ವಿವಿಗೆ ಸಿದ್ದರಾಮಯ್ಯ ನೋ ಎಂದಿದ್ದಾರೆ.