Widgets Magazine

ಡಿಕೆಶಿಗೆ ಟಾಂಗ್ - ರಾಜೀನಾಮೆ ವಾಪಸ್ ಪಡೆದ ಸಿದ್ದರಾಮಯ್ಯ?

ಬೆಂಗಳೂರು| Jagadeesh| Last Modified ಶುಕ್ರವಾರ, 20 ಡಿಸೆಂಬರ್ 2019 (17:13 IST)

ತಾವು ನೀಡಿರೋ ರಾಜೀನಾಮೆ ಪತ್ರವನ್ನು ವಾಪಸ್ ಪಡೆಯಲು ಮಾಜಿ ಸಿಎಂ ತೀರ್ಮಾನ ಮಾಡಿದ್ದಾರಾ? ಇಂಥದ್ದೊಂದು ಚರ್ಚೆ ಶುರುವಾಗಿದೆ.

 

ವಿಧಾನ ಸಭೆ ವಿರೋಧ ಪಕ್ಷದ ನಾಯಕ ಹಾಗೂ ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕನ ಸ್ಥಾನಕ್ಕೆ ಬೈ ಎಲೆಕ್ಷನ್ ರಿಸಲ್ಟ್ ಬಂದ ಬಳಿಕ ಸಿದ್ದರಾಮಯ್ಯ ರಾಜೀನಾಮೆ ನೀಡಿದ್ರು.

ಆದರೆ ಇದೀಗ ರಾಜೀನಾಮೆ ವಾಪಸ್ ಪಡೆಯೋ ತೀರ್ಮಾನಕ್ಕೆ ಬಂದಿರೋದಾಗಿ ಕೈ ಪಡೆಯಲ್ಲಿ ಚರ್ಚೆ ನಡೆಯುತ್ತಿದೆ.

ಸಿದ್ದರಾಮಯ್ಯ ರಾಜೀನಾಮೆ ನೀಡಿದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ದಿನೇಶ್ ಗುಂಡುರಾವ್ ರಾಜೀನಾಮೆ ನೀಡಿದ್ರು. ಮಾಜಿ ಸಚಿವ ಡಿ.ಕೆ.ಶಿವಕುಮಾರ್, ಮಾಜಿ ಕೇಂದ್ರ ಸಚಿವ ಕೆ.ಹೆಚ್.ಮುನಿಯಪ್ಪ ಹೆಸರು ಕೇಳಿಬಂದಿತ್ತು. ಇದೀಗ ಸಿದ್ದರಾಮಯ್ಯ ರಾಜೀನಾಮೆ ವಾಪಸ್ ಪಡೆದರೆ ಗುಂಡುರಾವ್ ನಡೆ ಎತ್ತ ಸಾಗಲಿದೆ ಅನ್ನೋದು ಗೊತ್ತಾಗಬೇಕಿದೆ.

 

 

ಇದರಲ್ಲಿ ಇನ್ನಷ್ಟು ಓದಿ :