ಕಾಂಗ್ರೆಸ್ ಶಾಸಕರು ರಾಜೀನಾಮೆ ನೀಡಿರುವುದಕ್ಕೆ ಕೈ ಪಡೆ ಮುಖಂಡರು ಹಾಗೂ ಹೈಕಮಾಂಡ್ ಗರಂ ಆಗಿದೆ. ಈ ನಡುವೆ ಮುಂಬೈಗೆ ಹಾರಿರೋ ಶಾಸಕರನ್ನು ಒಲಿಸಿಕೊಳ್ಳಲು ಕಾಂಗ್ರೆಸ್ ಕೊನೆ ದಾಳ ಉರುಳಿಸಿದೆ.ಸಂವಿಧಾನದ 164 ರ ವಿಧಿ ಪ್ರಕಾರ ಹಾಗೂ ಪಕ್ಷಾಂತರ ಕಾಯ್ದೆ ವಿಧಿ 10 ರ ರಂತೆ ರಾಜೀನಾಮೆ ನೀಡಿರೋ ಕಾಂಗ್ರೆಸ್ ಶಾಸಕರ ವಿರುದ್ಧ ಪಕ್ಷ ವಿರೋಧ ಚಟುವಟಿಕೆಯ ಆರೋಪದ ಮೇರೆಗೆ ಶಾಸಕ ಸ್ಥಾನದಿಂದ ಅನರ್ಹಗೊಳಿಸಲಾಗುತ್ತಿದೆ. ಹೀಗಂತ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದು,