ಒಬ್ಬ ಮಂತ್ರಿ ಸಂವಿಧಾನವನ್ನೇ ಸುಡ್ತೀನಿ ಅಂತಾರೆ. ನಾನೇನಾದ್ರೂ ಪ್ರಧಾನಿಯಾಗಿದ್ದರೆ ಮೊದಲು ಜೈಲಿಗೆ ಹಾಕ್ತಿದ್ದೆ ಎಂದು ಕೇಂದ್ರ ಸಚಿವ ಅನಂತ ಕುಮಾರ ಹೆಗಡೆ ವಿರುದ್ಧ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.ಅರಮನೆ ಮೈದಾನದಲ್ಲಿ ಯೂತ್ ಕಾಂಗ್ರೆಸ್ ಸದಸ್ಯರ ಸಭೆಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ ನೀಡಿದ್ದು, ತಿಪ್ಪರಲಾಗ ಹೊಡೆದ್ರೂ ಬಿಜೆಪಿ ಅಧಿಕಾರಕ್ಕೆ ಬರಲ್ಲ. ಅವರಪ್ಪನಾಣೆ ಮೋದಿ ಮತ್ತೆ ಪ್ರಧಾನಿಯಾಗಲ್ಲ ಎಂದರು.ಪ್ರಜಾಪ್ರಭುತ್ವವನ್ನೇ ನಾಶಮಾಡಲು ಹೊರಟವರು ಅವರು, ಇನ್ನೊಬ್ಬ ಮಂತ್ರಿ ಸಂವಿಧಾನವನ್ನೇ ಸುಡ್ತೀನಿ ಅಂತಾರೆ.