ಶ್ರೀರಾಮುಲು ವಾಲ್ಮೀಕಿ ಅಂತ, ಸಿದ್ದರಾಮಯ್ಯ ಕುರುಬ ಅಂತೇಳಿ ರಾಜಕಾರಣ ಮಾಡೋಕೆ ಬಂದಿಲ್ಲ. ಬಾದಾಮಿಯಲ್ಲಿ ಬಿಜೆಪಿ - ಕಾಂಗ್ರೆಸ್ ಅಂತ ಚುನಾವಣೆ ಮಾಡುತ್ತಿದ್ದೇವೆ ಎಂದು ಮಾಜಿ ಸಚಿವ ಸತೀಶ್ ಜಾರಕಿಹೊಳಿ ತಿರುಗೇಟು ನೀಡಿದ್ದಾರೆ. ಸಿಎಂ ಸೂಚನೆಯಂತೆ ಬಾದಾಮಿಯಲ್ಲಿ ಸಭೆ ಕರೆದಿದ್ದೇವೆ. ಎಲ್ಲ ಮುಖಂಡರೊಂದಿಗೆ ಚಚಿ೯ಸಿ ಅಭಿಪ್ರಾಯ ಪಡೆದು ಚುನಾವಣೆ ಕಾಯ೯ತಂತ್ರ ರೂಪಿಸ್ತೇವೆ. ಈಗಾಗಲೇ ನಮ್ಮ ಟೀಮ್ ಗ್ರೌಂಡ ಲೇವಲ್ ನಲ್ಲಿ ಕೆಲಸ ಮಾಡುತ್ತಿದೆ. ಸಾಮೂಹಿಕ ನಾಯಕತ್ವದಲ್ಲಿ ಚುನಾವಣೆ ಎದುರಿಸುತ್ತೇವೆ ಎಂದರು.