ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಬಿ.ಸಿ.ಪಾಟೀಲ್ ಟಾಂಗ್ ನೀಡಿದ್ದಾರೆ. ಕಾಂಗ್ರೆಸ್ ನ ಅಧಿನಾಯಕಿ ಸೋನಿಯಾ ಗಾಂಧಿಯವರ ಇಟಲಿ ದೇಶದಲ್ಲೇ ಕೊರೊನಾ ಕೇಸ್ ಹೆಚ್ಚಾಗಿವೆ. ನಮ್ಮ ದೇಶದ ಜನಸಂಖ್ಯೆಯನ್ನು ಸಿದ್ದರಾಮಯ್ಯ ಗಮನಿಸಬೇಕು. ಅವರು ಕೊರೊನಾ ಬಗ್ಗೆ ತಿಳಿದುಕೊಳ್ಳಲು ಬರೀ ಕಾಮನ್ ಸೆನ್ಸ್ ಇದ್ದರೆ ಸಾಲದು, ಜೊತೆಗೆ ಜನರಲ್ ನಾಲೆಡ್ಜೂ ಇರಬೇಕು ಎಂದು ಕೃಷಿ ಮತ್ತು ಜಿಲ್ಲಾ ಉಸ್ತುವಾರಿ ಸಚಿವ ಬಿ.ಸಿ.ಪಾಟೀಲ ತಿರುಗೇಟು ನೀಡಿದ್ದಾರೆ.ಕೊರೊನಾ ಮಾಹಿತಿಗಾಗಿ ಪಿಎಚ್ಡಿನೇ ಮಾಡಬೇಕೆಂದಿಲ್ಲ, ಕಾಮನ್ ಸೆನ್ಸ್ ಸಾಕು