ಮೈಸೂರು|
pavithra|
Last Modified ಮಂಗಳವಾರ, 26 ನವೆಂಬರ್ 2019 (10:56 IST)
ಮೈಸೂರು : ಸಿದ್ದರಾಮಯ್ಯ ಇನ್ನೂ 3 ವರ್ಷ ವಿಪಕ್ಷದಲ್ಲಿಯೇ ಇರಬೇಕು ಎಂದು ಸಿಎಂ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ಮೈಸೂರಿನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಉಪಚುನಾವಣೆಯಲ್ಲಿ 15ಕ್ಕೆ 15 ಸ್ಥಾನಗಳನ್ನು ಗೆಲ್ತೇವೆ. ನಾನು ಇದನ್ನು ಪ್ರಚಾರಕ್ಕೆ ಹೇಳ್ತಿಲ್ಲ. ಅಳೆದು ತೂಗಿ ಹೇಳ್ತಿದ್ದೇನೆ. ಸಿದ್ದರಾಮಯ್ಯ ಮಧ್ಯಂತರ ಚುನಾವಣೆ ಬಗ್ಗೆ ಮಾತಾಡ್ತಾರೆ. ರಾಜ್ಯದ ಜನರಿಗೆ ಚುನಾವಣೆ ಬೇಡವಾಗಿದೆ. ಸಿದ್ದರಾಮಯ್ಯ ಅವರ ಹೇಳಿಕೆಗಳಿಗೆ ಕವಡೆಕಾಸಿನ ಕಿಮ್ಮತ್ತಿಲ್ಲ ಎಂದು ಹೇಳಿದ್ದಾರೆ.
ಹಾಗೇ ಪರಿಷತ್ ಚುನಾವಣೆಯಲ್ಲಿ ಶಿಕ್ಷಕರ ಕ್ಷೇತ್ರದಿಂದ ಪುಟ್ಟಣ್ಣನವರ ಹೆಸರು ಕೇಳಿ ಬಂದ ವಿಚಾರದ ಬಗ್ಗೆ ಮಾತನಾಡಿದ ಅವರು, ಪರಿಷತ್ ಚುನಾವಣೆಗೆ ಪುಟ್ಟಣ್ಣನವರೇ ಬಿಜೆಪಿಯ ಅಭ್ಯರ್ಥಿ. ಪುಟ್ಟಣ್ಣ 3 ಬಾರಿ ಜೆಡಿಎಸ್ ಪಕ್ಷದಿಂದ ಪ್ರತಿಸಿಧಿಸಿದ್ದರು. ಅವರು ಗೆಲ್ಲುವ ಅಭ್ಯರ್ಥಿ. ಹೀಗಾಗಿ ಘೋಷಣೆ ಮಾಡಿದ್ದೇನೆ ಎಂದು ಸಿಎಂ ತಿಳಿಸಿದ್ದಾರೆ.