ಒಂದೆಡೆ ಕೊರೊನಾ ವಿರುದ್ಧ ಹೋರಾಟ ನಡೆಯುತ್ತಿದ್ದರೆ, ಇತ್ತ ಹಾಲಿ ಹಾಗೂ ಮಾಜಿ ಸಿಎಂಗಳ ಟ್ವೀಟ್ ಯುದ್ಧ ಶುರುವಾಗುವ ಲಕ್ಷಣಗಳು ಗೋಚರಿಸುತ್ತಿವೆ. ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪನವರ ಸಿಎಂ ಆಫ್ ಕರ್ನಾಟಕ ಅಕೌಂಟ್ ಗೆ ಮಾಜಿ ಸಿಎಂ ಸಿದ್ದರಾಮಯ್ಯ ಸರಣಿ ಟ್ವೀಟ್ ಗಳನ್ನು ಮಾಡಿ ಟ್ಯಾಗ್ ಮಾಡಿದ್ದಾರೆ. ಕೊರೊನಾ ತಡೆಗೆ ಸರ್ವಪಕ್ಷಗಳ ಪರಿಶೀಲನಾ ಸಮಿತಿ ರಚಿಸಬೇಕು. ಪಕ್ಷಗಳ ವೈದ್ಯಕೀಯ ಶಿಕ್ಷಣ ಹೊಂದಿದವರನ್ನು ಸಮಿತಿಯಲ್ಲಿ ಸೇರಿಸಬೇಕು ಎಂದೆಲ್ಲ ಸಲಹೆ ನೀಡುವುದರ ಜೊತೆಗೆ ಸರಕಾರದ ವಿರುದ್ಧ ಸಿದ್ದರಾಮಯ್ಯ