ಬೆಂಗಳೂರು : ದೆಹಲಿಯಲ್ಲೊಬ್ಬರು ಪಾಳೇಗಾರರಾಜ್ಯದಲ್ಲೊಬ್ಬರು ಮಾಂಡಲಿಕ ಭಲೇ ಜೋಡಿ ಎಂದು ರಾಜ್ಯದಲ್ಲಿ ನೈಟ್ ಕರ್ಪ್ಯೂ ಬಗ್ಗೆ ಸಿದ್ದರಾಮಯ್ಯ ಲೇವಡಿ ಮಾಡಿದ್ದಾರೆ. ನೈಟ್ ಕರ್ಪ್ಯೂ ಹೇರಿಕೆ ಬಾಲಿಶವಾದ ಕ್ರಮ. ಕೊರೊನಾ ಓಡಿಸಲು ತಟ್ಟೆ ಬಡಿದಷ್ಟೆ ಬಾಲಿಶ. ರಾತ್ರಿ ತೆರೆದಿರುವ ಹೋಟೆಲ್ , ಚಿತ್ರಮಂದಿರ , ಅಂಗಡಿ ಮುಗ್ಗಟ್ಟು ಮುಚ್ಚಿದರೆ ಸಾಲದೇ? ರಾತ್ರಿ ಕರ್ಪ್ಯೂವಿನ ನಾಟಕ ಯಾಕೆ? ಎಂದು ಸಿದ್ದರಾಮಯ್ಯ ಪ್ರಶ್ನಿಸಿದ್ದಾರೆ.ಸಿಎಂ ಮೊದಲು ಸುರಕ್ಷತಾ ಕ್ರಮ ಕೈಗೊಳ್ಳಲಿ. ಜೊತೆಗೆ ಕೋವಿಡ್ ಪರೀಕ್ಷೆ ಹೆಚ್ಚಿಸಬೇಕು.