ಬಿ.ಎಸ್.ವೈ ಕೂಡಲೇ ರಾಜೀನಾಮೆ ನೀಡಬೇಕೆಂದ ಸಿದ್ದರಾಮಯ್ಯ!

ಹುಬ್ಬಳ್ಳಿ, ಸೋಮವಾರ, 11 ಫೆಬ್ರವರಿ 2019 (10:46 IST)

ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಕೂಡಲೇ ರಾಜೀನಾಮೆ ನೀಡಬೇಕೆಂದು ಮಾಜಿ ಸಿಎಂ ಆಗ್ರಹ ಮಾಡಿದ್ದಾರೆ. ಆಪರೇಷನ್ ಕಮಲ ಕುರಿತ ಆಡಿಯೋದಲ್ಲಿ ಮಾತನಾಡಿದ್ದು ಸಾಬೀತಾದರೆ ರಾಜೀನಾಮೆ ಕೊಡುವೆ ಎಂದಿದ್ದ ಅವರು, ತಮ್ಮ ಮಾತನ್ನು ರಾಜೀನಾಮೆ ಕೊಟ್ಟು ಉಳಿಸಿಕೊಳ್ಳಬೇಕೆಂದು ಒತ್ತಾಯ ಮಾಡಿದ್ದಾರೆ.

ಹುಬ್ಬಳ್ಳಿಯಲ್ಲಿ ಮಾತನಾಡಿರುವ ಮಾಜಿ ಸಿಎಂ ಹಾಗೂ ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯ, ಬಿ.ಎಸ್.ವೈ ರಾಜೀನಾಮೆಗೆ ಒತ್ತಾಯ ಮಾಡಿದ್ದಾರೆ.

ಯಡಿಯೂರಪ್ಪ ಸಾರ್ವಜನಿಕ ಜೀವನದಲ್ಲಿರಲು ಯಡಿಯೂರಪ್ಪ ನೈತಿಕತೆ ಉಳಿಸಿಕೊಂಡಿಲ್ಲ. ಕೂಡಲೇ ಅವರು ರಾಜೀನಾಮೆ ಕೊಡಬೇಕು. ಆಡಿಯೋ ಸಾಬೀತಾದ್ರೆ ರಾಜಿನಾಮೆ ಕೊಡ್ತಿನಿ ಎಂದಿದ್ದರು. ಈಗ ಆ ಮಾತನ್ನು ಪಾಲಿಸಲಿ ಎಂದಿದ್ದಾರೆ.

ಆಡಿಯೋದಲ್ಲಿ ಮಾತನಾಡಿದ್ದು ನಾನಲ್ಲ. ಅದು ಮಿಮಿಕ್ರಿ ಎಂದು ಮೊದಲು ಹೇಳಿದ್ದರು. ಈಗ ಆಡಿಯೋ ನನ್ನದೇ ಎನ್ನುತ್ತಿದ್ದಾರೆ ಎಂದ ಅವರು, ಪ್ರಧಾನಿ ವಿರುದ್ಧವೂ ಹರಿಹಾಯ್ದರಯ, ರೈತರ ಬಗ್ಗೆ ಕಾಳಜಿ ತೋರುವ ಪಿಎಂ, ರೈತರ ಸಾಲವನ್ನು ಏಕೆ ಮನ್ನಾ ಮಾಡಿಲ್ಲ ಎಂದು ದೂರಿದರು.


 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಇಂದು ಸದನದಲ್ಲಾಗುತ್ತಾ ಸಿಡಿ ಬ್ಲಾಸ್ಟ್?

ಒಂದೆಡೆ ಸರಕಾರದ ವಿರುದ್ಧ ಬಿ.ಎಸ್.ಯಡಿಯೂರಪ್ಪ ವಾಗ್ದಾಳಿ ನಡೆಸಲು ಮುಂದಾಗಿದ್ದರೆ, ಮತ್ತೊಂದೆಡೆ ಬಿ.ಎಸ್.ವೈ ...

news

ವೇದಿಕೆ ಮೇಲೆ ಬಿಎಸ್ ವೈ ಜೊತೆ ಮಾತನಾಡದೇ ನಿರ್ಗಮಿಸಿದ ಪ್ರಧಾನಿ ಮೋದಿ

ಹುಬ್ಬಳ್ಳಿ : ಧಾರವಾಡ ಹಾಗೂ ಹುಬ್ಬಳ್ಳಿಯಲ್ಲಿ ನಡೆದ ಎರಡೂ ಕಾರ್ಯಕ್ರಮಕ್ಕೆ ಆಗಮಿಸಿದ ಪ್ರಧಾನಿ ನರೇಂದ್ರ ...

news

ಅಬುಧಾಬಿಯಲ್ಲಿ ನೆಲೆಸಿರುವ ಭಾರತೀಯರಿಗೊಂದು ಸಿಹಿಸುದ್ದಿ

ಅಬುಧಾಬಿ : ಅಬುಧಾಬಿಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾರತೀಯರು ನೆಲೆಸಿರುವ ಕಾರಣದಿಂದ ಅಲ್ಲಿನ ...

news

ಆನ್‍ಲೈನ್ ಅಪ್ಲಿಕೇಷನ್ ಮೂಲಕ ಕೆಲಸ ಹುಡುಕುತ್ತಿರುವ ಯುವತಿಯರೇ ಎಚ್ಚರ

ಬೆಂಗಳೂರು : ಕಾಲ್ ಸೆಂಟರ್ ಕೆಲಸ, ಕೈತುಂಬ ವೇತನ ಕೊಡುವುದಾಗಿ ಸುಳ್ಳು ಹೇಳಿ ಯುವಕರಿಗೆ ಪ್ರಚೋದನೆ ಮಾಡಿ ...