ಮೈತ್ರಿ ಸರಕಾರ ಹಾಗೂ ಮಾಜಿ ಸಿಎಂ ಸಿದ್ದರಾಮಯ್ಯ ವಿರುದ್ಧ ಗಂಭೀರ ಟೀಕೆಗಳು ಕೇಳಿಬರಲಾರಂಭಿಸಿವೆ. ಸಿದ್ದರಾಮಯ್ಯಗೆ ಮುಂದಿನ ಚುನಾವಣೆಯಲ್ಲಿಯೂ ಜನರು ನಾಮ ಹಾಕ್ತಾರೆ. ಹೀಗಂತ ಮಾಜಿ ಡಿಸಿಎಂ ಹೇಳಿದ್ದಾರೆ.ಮೈತ್ರಿ ಪಕ್ಷಗಳ ನಾಯಕರ ವಿರುದ್ಧ ಬಿಜೆಪಿ ಶಾಸಕ, ಮಾಜಿ ಡಿಸಿಎಂ ಆರ್. ಅಶೋಕ್ ಟೀಕೆ ಮಾಡಿದ್ದಾರೆ.ಚುನಾವಣೆಯಲ್ಲಿ ಜೆಡಿಎಸ್ ನಾಯಕರು ದೇವಸ್ಥಾನಗಳನ್ನು ಸುತ್ತಿದ್ರು. ಹೆಚ್.ಡಿ.ರೇವಣ್ಣ ನಿಂಬೆಹಣ್ಣು ಹಿಡಿದು ಓಡಾಡ್ತಿದ್ರು. ಹಾಸನದಲ್ಲಿ ರೇವಣ್ಣ ಅವರ ತೆಂಗಿನಕಾಯಿ ಒಡೆಯಲಿಲ್ಲ. ಜೆಡಿಎಸ್ ಗೆ ಕೊನೆಗೆ ದೇವರೂ ಕೈ ಬಿಟ್ಟ.