ಹುಬ್ಬಳ್ಳಿ: ಮೊನ್ನೆಯಷ್ಟೇ ಮುಂದಿನ ಸಿಎಂ ನಾನೇ ಎಂದು ಮೈತ್ರಿ ಸರ್ಕಾರದಲ್ಲಿ ತಳಮಳ ಸೃಷ್ಟಿಸಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಮತ್ತೆ ಅದೇ ಮಾತನ್ನು ಪುನರುಚ್ಚರಿಸಿದ್ದಾರೆ.ಮತ್ತೆ ನಾನೇ ಸಿಎಂ ಆಗುತ್ತೇನೆ. ಇದರಲ್ಲಿ ಯಾವ ಸಂಶಯವೂ ಬೇಡ ಎಂದು ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಪತ್ರಕರ್ತರೊಂದಿಗೆ ಮಾತನಾಡುತ್ತಾ ಸಿದ್ದರಾಮಯ್ಯ ಪುನರುಚ್ಚರಿಸಿದ್ದಾರೆ.ಆದರೆ ಈಗಿನ ಮೈತ್ರಿ ಸರ್ಕಾರಕ್ಕೆ ತೊಂದರೆಯಿಲ್ಲ. ಈ ಸರ್ಕಾರ ಭದ್ರವಾಗಿದೆ. ಬಿಜೆಪಿಯವರು ಹೇಳುವಂತೆ ಯಾವುದೇ ರೀತಿಯಲ್ಲಿ ಈ ಸರ್ಕಾರ ಮುರಿದು ಬೀಳಲ್ಲ. ನಾನು ಮತ್ತೆ ಸಿಎಂ