ಬೆಂಗಳೂರು: ಹನುಮ ಜಯಂತಿಯಂದು ಬಾಡೂಟ ಸೇವಿಸುವಾಗ ‘ಹನುಮ ಯಾವಾಗ ಹುಟ್ಟಿದ್ದ ಅಂತ ಗೊತ್ತಾ? ಸುಮ್ನೇ ತಿನ್ಲಾ’ ಎಂದು ಪಕ್ಕದಲ್ಲಿದ್ದವರಿಗೆ ಹೇಳಿ ಸ್ವಗ್ರಾಮದಲ್ಲಿ ಗಡದ್ ಬಾಡೂಟ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯಗೆ ಈಗ ಅದುವೇ ಮುಳುವಾಗಿದೆ.