ಬೆಂಗಳೂರು: ಕರಾವಳಿ ಜನ ಯಾಕಾದ್ರೂ ಬಿಜೆಪಿಗೆ ವೋಟು ಕೊಟ್ಟರೆಂದು ಅರ್ಥವಾಗುತ್ತಿಲ್ಲ ಎಂದು ಬಿಜೆಪಿ ವಿರುದ್ಧ ಉಡುಪಿಯಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.ಶಿವಮೊಗ್ಗ ಕ್ಷೇತ್ರದ ಉಪಚುನಾವಣೆಗೆ ಜೆಡಿಎಸ್ ಅಭ್ಯರ್ಥಿ ಮಧು ಬಂಗಾರಪ್ಪ ಪರ ಉಡುಪಿಯ ಬೈಂದೂರಿನಲ್ಲಿ ಪ್ರಚಾರ ಭಾಷಣ ಮಾಡಿದ್ದ ಸಿದ್ದರಾಮಯ್ಯ ಬಿಜೆಪಿ ವಿರುದ್ಧ ಟೀಕಾಪ್ರಹಾರ ನಡೆಸಿದ್ದಾರೆ.ನಿಮ್ಮ ದನ ಕರುಗಳು ಕೊಟ್ಟಿಗೆಗೆ ಬರಬೇಕೇ? ಹೆಣ್ಣು ಮಕ್ಕಳು ಸುರಕ್ಷಿತವಾಗಿ ಮನೆ ಸೇರಬೇಕೇ? ಹಾಗಿದ್ದರೆ ಬಿಜೆಪಿಗೆ ಮತ ಕೊಡಿ ಎಂದು ಬಿಜೆಪಿಯವರು ಮತ