ಬೆಂಗಳೂರು: ಇಂದು ಟಿಪ್ಪು ಜಯಂತಿ ಆಚರಣೆಗೆ ವಿರೋಧ ವ್ಯಕ್ತಪಡಿಸುತ್ತಿರುವ ವಿಪಕ್ಷ ಬಿಜೆಪಿ ಮತ್ತು ಹಿಂದೂ ಸಂಘಟನೆಗಳಿಗೆ ಮಾಜಿ ಸಿಎಂ ಸಿದ್ದರಾಮಯ್ಯ ತಿರುಗೇಟು ನೀಡಿದ್ದಾರೆ.ಟಿಪ್ಪು ಸುಲ್ತಾನ್ ಸಮರ್ಥಿಸಿದ ಸಿದ್ದರಾಮಯ್ಯ, ಟಿಪ್ಪು ಒಬ್ಬ ದೇಶಪ್ರೇಮಿ ಅರಸ. ಆತನ ಕಾಲದಲ್ಲಿ ಪ್ರಜಾಪ್ರಭುತ್ವವಿರಲಿಲ್ಲ. ರಾಜಧರ್ಮಕ್ಕೆ ಅನುಸಾರವಾಗಿ ಏನು ಮಾಡಬೇಕೋ ಮಾಡಿದ್ದ. ಟಿಪ್ಪುವನ್ನು ದೇಶದ್ರೋಹಿ ಎನ್ನುವವರಾದರೆ ರಾಣಿ ಅಬ್ಬಕ್ಕ, ಒನಕೆ ಓಬವ್ವ, ಸಂಗೊಳ್ಳಿ ರಾಯಣ್ಣ ಮುಂತಾದ ಹೋರಾಟಗಾರರನ್ನು ಯಾವ ಸಾಲಿಗೆ ಸೇರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ಅಷ್ಟೇ ಅಲ್ಲದೆ, ಬಿಜೆಪಿ