ಮಾಜಿ ಸಿಎಂ ಸಿದ್ದರಾಮಯ್ಯರನ್ನ ಅವರ ಬದ್ಧ ವೈರಿಗಳು ಭೇಟಿ ಮಾಡಿ ಕುತೂಹಲ ಮೂಡಿಸಿದ್ದಾರೆ. ಅನಾರೋಗ್ಯದಿಂದ ಶಸ್ತ್ರಚಿಕಿತ್ಸೆಗೆ ಒಳಗಾಗಿರೋ ವಿಪಕ್ಷ ನಾಯಕ ಸಿದ್ದರಾಮಯ್ಯರನ್ನು ಹೆಚ್.ವಿಶ್ವನಾಥ್, ಜಿ.ಟಿ.ದೇವೇಗೌಡ ಭೇಟಿ ಮಾಡಿ ಆರೋಗ್ಯ ವಿಚಾರಿಸಿದ್ರು. ರಾಜಕೀಯ ರಂಗದಲ್ಲಿ ಕಟ್ಟಾ ವಿರೋಧಿಗಳಾಗಿರೋ ಮೂವರೂ ಒಂದೆಡೆ ಸೇರಿದಾಗ ವಯಕ್ತಿಕವಾಗಿ ಮಾತುಕತೆ ನಡೆಸಿದ್ದಾರೆ.ಆರೋಪ, ಟೀಕೆಗಳು, ದೂಷಣೆಯಲ್ಲೇ ಯಾವಾಗಲೂ ಸದ್ದು ಮಾಡೋ ಈ ಮೂವರು ನಾಯಕರು ಆಸ್ಪತ್ರೆಯಲ್ಲಿ ಭೇಟಿಯಾದಾಗ ಆತ್ಮೀಯತೆಯಿಂದ ಮಾತನಾಡಿರೋದು ವಿಶೇಷ.