ತುಮಕೂರು : ಅಕ್ರಮ ಹಣ ಸಂಗ್ರಹಿಸಿ ಎಲ್ಲರೂ ಉಗ್ರಗಾಮಿಗಳಾಗಿ ಜೈಲಿಗೆ ಹೋಗುತ್ತಿದ್ದಾರೆ. ಸಿದ್ದರಾಮಯ್ಯ ಕೂಡ ಒಂದು ದಿನ ಜೈಲಿಗೆ ಹೋಗ್ತಾನೆ ಎಂದು ಮಾಜಿ ಸಚಿವ ಸೊಗಡು ಶಿವಣ್ಣ ಸಿದ್ದರಾಮಯ್ಯ ವಿರುದ್ಧ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮನಿ ಟೆರರಿಸ್ಟ್, ಜಾತಿ ಟೆರರಿಸ್ಟ್ ಸಿದ್ದರಾಮಯ್ಯ ಯಾವುದೇ ಕೇಸ್ ನಲ್ಲಿ ಸಿಕ್ಕಿಹಾಕಿಕೊಳ್ಳಲಿಲ್ಲ. ಮುಂದೊಂದು ದಿನ ಯಾವುದಾದರೂ ಪ್ರಕರಣದಲ್ಲಿ ಸಿಕ್ಕಿಹಾಕಿಕೊಳ್ಳುತ್ತಾನೆ. ಈ ಬಗ್ಗೆ ಅವರ ಹೇಳಿಕೆಗಳೇ ಮುನ್ಸೂಚನೆ ನೀಡುತ್ತಿದೆ ಎಂದು ಹೇಳಿದ್ದಾರೆ.