ಹುಬ್ಬಳ್ಳಿ: ಬಿಜೆಪಿಗೆ ವೋಟು ಹಾಕುವಂತೆ ಹೆಚ್.ಡಿ.ಕುಮಾರಸ್ವಾಮಿ ಸೂಚಿಸಿದ್ದಾರೆ ಎಂಬ ಜಿಟಿ ದೇವೇಗೌಡರ ಹೇಳಿಕೆ ಇಟ್ಟುಕೊಂಡು ಹೆಚ್ ಡಿಕೆಗೆ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ. ಹುಬ್ಬಳ್ಳಿ ವಿಮಾನ ನಿಲ್ದಾಣದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಿದ್ದರಾಮಯ್ಯ, ಬಿಜೆಪಿಗೆ ಮತ ಹಾಕಿಸುವಂತೆ ಕುಮಾರಸ್ವಾಮಿ ಹೇಳಿದ್ರು ಎಂದು ಜಿಟಿಡಿಯವರೇ ಹೇಳಿದ್ದಾರೆ. ಇದು ಯಾರ ನಾಟಕ ಎಂದು ಪ್ರಶ್ನಿಸಿದ ಅವರು, ಕುಮಾರಸ್ವಾಮಿ ಸಾಲಮನ್ನಾ ಮಾಡಿದ್ದು ಸರಿಯಾಗಲಿಲ್ಲ, ನಾವು ಮಾಡಿದ್ದು ಸರಿ ಇತ್ತು ಎಂದು ಕುಟುಕಿದ್ದಾರೆ. ಸಮ್ಮಿಶ್ರ ಸರ್ಕಾರ ಕೆಟ್ಟದಾಗಿತ್ತೆಂದು ಅವರೇ