ರಾಜ್ಯಾದ್ಯಂತ ಬರದ ಛಾಯೆ, ಜನರಷ್ಟೇ ಅಲ್ಲ, ನೀರು ಆಹಾರಕ್ಕಾಗಿ ಪ್ರಾಣಿಗಳ ಪರದಾಟ. ಬೆಳೆದ ಬೆಳೆ ಹಾಳಾಗಿ ಸಾಲ ತೀರಿಸಲಾಗದೇ ದಿಕ್ಕೆಟ್ಟಿರುವ ರೈತ ಹೀಗೆ ಹತ್ತು ಹಲವು ಸವಾಲುಗಳ ನಡುವೆ ನಾಳೆ ಸಿಎಂ ಸಿದ್ದರಾಮಯ್ಯ ರಾಜ್ಯ ಹಣಕಾಸು ಬಜೆಟ್ ಮಂಡಿಸುತ್ತಿದ್ದಾರೆ. ರಾಜ್ಯದ 2 ಕ್ಷೇತ್ರಗಳ ಉಪಚುನಾವಣೆ, ಮುಂದಿನ ವರ್ಷ ರಾಜ್ಯ ವಿಧಾನಸಭೆ ಗುರಿಯಾಗಿಸಿಕೊಂಡು ಸಿಎಂ ಸಿದ್ದರಾಮಯ್ಯ ಜನಪ್ರಿಯ ಬಜೆಟ್ ಮಂಡಿಸುವ ಸಾಧ್ಯತೆ ಇದೆ. ಪಂಚರಾಜ್ಯಗಳ ಚುನಾವಣೆಯಲ್ಲಿ ಪಂಜಾಬ್ ಹೊರತುಪಡಿಸಿ ಬೇರೆ ರಾಜ್ಯಗಳಲ್ಲಿ