ಬೆಂಗಳೂರು : ಕೆಫೆ ಕಾಫಿ ಡೇ ಸಂಸ್ಥಾಪಕ ವಿ.ಜಿ ಸಿದ್ದಾರ್ಥ್ ಅವರರು ಮೃತಪಟ್ಟ ಹಿನ್ನಲೆ ಉದ್ಯಮಿ ಸಿದ್ದಾರ್ಥ್ ಅವರು ದುಡುಕಿನ ನಿರ್ಧಾರ ತೆಗೆದುಕೊಂಡು ಬಿಟ್ಟರು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಬೇಸರ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಸ್.ಎಂ ಕೃಷ್ಣ ಕುಟುಂಬದವರಿಗೆ, ಸಿದ್ಧಾರ್ಥ್ ಅವರ ಕುಟುಂಬಕ್ಕೆ ಸಾಂತ್ವಾನ ಹೇಳೋಕೆ ಶಬ್ಧಗಳೇ ಸಿಗುತ್ತಿಲ್ಲ. ಮಂಗಳವಾರ ಎಸ್.ಎಂ ಕೃಷ್ಣ ಅವರ ಮನೆಗೆ ಹೋಗಿ ಅವರ ಶ್ರೀಮತಿಗೆ ಸಾಂತ್ವಾನ ಹೇಳಿ ಬಂದಿದ್ದೆ.