ಸಿದ್ದುಗೆ ಹಾಸನ ಮೇಲೆ ಪ್ರೀತಿ, ಮಂಡ್ಯ ಮೇಲೆ ಮುನಿಸು?; ಸಿಎಂ ಗರಂ

ಬೆಂಗಳೂರು, ಸೋಮವಾರ, 25 ಮಾರ್ಚ್ 2019 (13:08 IST)

ಮಾಜಿ ಸಿಎಂ ಸಿದ್ದರಾಮಯ್ಯನವರ ಮೇಲೆ ಹಾಲಿ ಸಿಎಂ ಹೆಚ್.ಡಿ.ಕುಮಾರಸ್ವಾಮಿ ತೀವ್ರ ಅಸಮಧಾನಗೊಂಡಿದ್ದಾರೆ.

ಹಾಸನ ಮೇಲಿರೋ ಪ್ರೀತಿ ಮಂಡ್ಯದ ಮೇಲೆ ಸಿದ್ದುಗೆ ಇಲ್ಲ ಎಂದು ಮೇಲೆ ಸಿಟ್ಟಾಗಿದ್ದಾರಂತೆ ಸಿಎಂ ಹೆಚ್. ಡಿ. ಕುಮಾರಸ್ವಾಮಿ.

ಸಿದ್ದರಾಮಯ್ಯ ನಡೆ ಬಗ್ಗೆ ಸಿಎಂ ಅಸಮಾಧಾನ ವ್ಯಕ್ತಪಡಿಸಿದ್ದು, ಹಾಸನ ಕೈ ನಾಯಕರ ಸಭೆ ಕರೆದು ಪ್ರಜ್ವಲ್ ಗೆ ಬೆಂಬಲ ನೀಡಿ ಅಂತ ಮಾಜಿ ಸಿಎಂ ಹೇಳಿದ್ದರು. 

ಆದ್ರೆ, ಕೈ ಮುಖಂಡರ ಸಭೆಯನ್ನ‌ ಒಮ್ಮೆಯೂ ಕರೆದಿಲ್ಲ. ಹಾಸನ ಕೈ ಮುಖಂಡರ ಜೊತೆ ಹೆಚ್. ಡಿ. ರೇವಣ್ಣರನ್ನ ಕರೆದು ಸಂಧಾನ ಮಾಡ್ತಾರೆ ಸಿದ್ದರಾಮಯ್ಯ.

ಆದ್ರೆ ಮಂಡ್ಯ ಕಾಂಗ್ರೆಸ್ ನಾಯಕರ ಹಾಗೂ ಜೆಡಿಎಸ್ ಮುಖಂಡರನ್ನ ಸೇರಿಸೋ ಕೆಲಸವನ್ನೇಕೆ ಮಾಡಿಲ್ಲ ಎಂಬುದೇ ಸಿಎಂ ಗರಂ ಆಗಲು ಕಾರಣ ಎನ್ನಲಾಗಿದೆ.

ಹಾಸನದ ಮೇಲಿನ ಪ್ರೀತಿಯನ್ನು ಮಂಡ್ಯದ ಮೇಲೆ ಸಿದ್ದರಾಮಯ್ಯ ತೋರುತ್ತಿಲ್ಲ ಎನ್ನಲಾಗುತ್ತಿದೆ. ಹೀಗಾಗಿ ಸಿದ್ದರಾಮಯ್ಯ ನಡೆ ಬಗ್ಗೆ ಕುತೂಹಲ ಮೂಡಿದೆ.
 ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಪ್ರಕಾಶ್ ರೈ ಲೆಕ್ಕಕ್ಕಿಲ್ಲ ಅಂತಂದ ಕಾಂಗ್ರೆಸ್ ಅಭ್ಯರ್ಥಿ

ಬೆಂಗಳೂರು ಸೆಂಟ್ರಲ್ ನಲ್ಲಿ ಕಾಂಗ್ರೆಸ್ ಹಾಗೂ ಬಿಜೆಪಿ ನಡುವೆ ಸ್ಪರ್ಧೆ ಇದೆ. ಹೀಗಂತ ಕಾಂಗ್ರೆಸ್ ...

news

ಬೆಂಗಳೂರು ಉತ್ತರ ಕ್ಷೇತ್ರವನ್ನು ಕಾಂಗ್ರೆಸ್ ಗೆ ಬಿಟ್ಟುಕೊಟ್ಟ ಜೆಡಿಎಸ್. ಕಾರಣವೇನು ಗೊತ್ತಾ?

ಬೆಂಗಳೂರು : ಸೀಟು ಹಂಚಿಕೆ ವೇಳೆ ಬೆಂಗಳೂರು ಉತ್ತರ ಲೋಕಸಭಾ ಕ್ಷೇತ್ರವನ್ನು ಆಯ್ಕೆ ಮಾಡಿದ ಜೆಡಿಎಸ್ ಇದೀಗ ಆ ...

news

ಓಲಾ ಸಂಚಾರ ನಿಷೇಧ ಆದೇಶ ವಾಪಸ್; ಸಚಿವ ಪ್ರಿಯಾಂಕ್ ಖರ್ಗೆಯ ಕಾಲೆಳೆದ ನೆಟ್ಟಿಗರು

ಬೆಂಗಳೂರು : ಓಲಾ ಸಂಚಾರ ನಿಷೇಧ ಆದೇಶ ವಾಪಸ್ ಪಡೆದುಕೊಂಡಿದ್ದಕ್ಕೆ ಸಚಿವ ಪ್ರಿಯಾಂಕ್ ಖರ್ಗೆಯನ್ನು ಸಾಮಾಜಿಕ ...

news

ಪ್ರಚಾರದ ವೇಳೆ ಪಾಕಿಸ್ತಾನದ ಪರ ಘೋಷಣೆ ಕೂಗಿದ ಅಭ್ಯರ್ಥಿ

ಕಾಶ್ಮೀರ : ಚುನಾವಣಾ ಪ್ರಚಾರದ ವೇಳೆ ನ್ಯಾಷನಲ್ ಕಾನ್ಫರೆನ್ಸ್ ಪಕ್ಷದ ಅಭ್ಯರ್ಥಿ ಪಾಕಿಸ್ತಾನದ ಪರ ಘೋಷಣೆ ...