ಒಂದು ವರ್ಷ ಸರಕಾರವಿರುತ್ತದೆಂದು ಕುಮಾರಸ್ವಾಮಿ ಹೇಳಿದರೆ 6 ತಿಂಗಳು ಇರುತ್ತದೆಂದು ಸಿದ್ದರಾಮಯ್ಯ ಹೇಳುತ್ತಿದ್ದಾರೆ. ಸಿದ್ದರಾಮಯ್ಯ ನೀಡಿದ ಕಷಾಯವನ್ನು ಇನ್ನೂ ಕೂಡ ಕುಮಾರಸ್ವಾಮಿ ಜೀರ್ಣಿಸಲು ಆಗಿಲ್ಲ. ಈ ಸರಕಾರ ಬಹಳಷ್ಟು ದಿನ ಬದುಕುವುದು ಕಷ್ಟವಾಗಿದೆ ಎಂದು ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.ಕುಂದಾಪುರದ ಬಿಜೆಪಿ ಕಚೇರಿಯಲ್ಲಿ ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಪ್ರಣಾಳಿಕೆಯಲ್ಲಿ ಹೇಳಿದಂತೆ ಸಂದ್ಯಾ ಸುರಕ್ಷ, ವ್ರದ್ಧಾಪ್ಯ ವೇತನ ವಿಚಾರ ಮರೆತಿದ್ದಾರೆ. ಇಂದಿರಾ ಕ್ಯಾಂಟಿನ್ ಮುಂದುವರೆಸುವುದಾಗಿ ಹೇಳಿದ್ದು