ಬಾಗಲಕೋಟ: ಕೃಷ್ಣಾ ತೀರದ ರೈತರ ಕಣ್ಮಣಿ ಶಾಸಕ ಸಿದ್ದು ನ್ಯಾಮಗೌಡ ಈಗ ನೆನಪು ಮಾತ್ರ. ನಿನ್ನೆ ರಸ್ತೆ ಅಪಘಾತದಲ್ಲಿ ನಿಧನರಾಗಿದ್ದ ಶ್ರಮ ಬಿಂದು ಸಾಗರದ ಹರಿಕಾರನಿಗೆ ಇಂದು ಕಣ್ಣೀರಿನ ವಿದಾಯ ಹೇಳಲಾಯ್ತು. ಬ್ಯಾರೇಜ್ ಸಿದ್ದು ಅಂತ ಖ್ಯಾತಿ ಹೊಂದಿದ್ದ ರೈತ ನಾಯಕ ಸಿದ್ದು ನ್ಯಾಮಗೌಡ ಮಣ್ಣಲ್ಲಿ ಮಣ್ಣಾಗಿದ್ದಾರೆ.