ರಾಜ್ಯದ ಸಿಸಿಬಿ ಪೊಲೀಸರು ಪೊಲೀಸ್ ಇತಿಹಾಸದಲ್ಲೇ ದೊಡ್ಡ ಜಾಲ ಬೆನ್ನಟ್ಟಿ ಬಂಧನ ಮಾಡಿದ್ದಾರೆ. ದೇವನಹಳ್ಳಿಗೆ 2 ಕ್ವಿಂಟಲ್ ಗಾಂಜಾ ಸಾಗಿಸುತ್ತಿರುವುದನ್ನು ಪೊಲೀಸರು ಪತ್ತೆ ಮಾಡಿ ಆರೋಪಿಗಳನ್ನು ಬಂಧನ ಮಾಡಿದ್ದಾರೆ.ಬಂಧಿತರಿಂದ 2 ಕ್ವಿಂಟಲ್ ಗೂ ಹೆಚ್ಚು ಗಾಂಜಾ, ಲಾರಿ, ಮೊಬೈಲ್ ಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.ಇಷ್ಟೊಂದು ದೊಡ್ಡ ಪ್ರಮಾಣದಲ್ಲಿ ಗಾಂಜಾ ಸಿಕ್ಕಿರುವುದು ಇದೇ ಮೊದಲು ಎನ್ನಲಾಗುತ್ತಿದೆ. ಆರೋಪಿಗಳಾದ ಜೆಡಿಎಸ್ ಮುಖಂಡ ಕೈಸರ್ ಪಾಷಾ ಹಾಗೂ ಸಮೀರ್, ಇಸ್ಮಾಯಿಲ್ ರನ್ನು ಬಂಧನ ಮಾಡಲಾಗಿದೆ.