ಸತತ ಎರಡನೇ ದಿನ ಬೆಂಗಳೂರು ನಗರದಲ್ಲಿ ಬಿರುಸಿನ ಬೇಸಿಗೆ ಮಳೆಯಾಗಿದೆ. ರಾತ್ರಿ 7.30ರ ಸುಮಾರಿಗೆ ಪ್ರಾರಂಭಗೊಂಡ ಗುಡುಗು ಮತ್ತು ಬಿರುಗಾಳಿ ಸಹಿತ ಧಾರಾಕಾರ ಮಳೆಗೆ ನಗರದ ಹಲವೆಡೆ ಮರ ಬಿದ್ದ, ಕೊಂಬೆ ಮುರಿದ ಪ್ರಕರಣಗಳು ವರದಿಯಾಗಿವೆ. ಹಲವು ತಗ್ಗು ಪ್ರದೇಶಗಳಲ್ಲಿ ಇರುವ ಬಡಾವಣೆಗಳಲ್ಲಿ ನೀರು ನಿಂತ ದೂರು ದಾಖಲಾಗಿದೆ. ಉತ್ತರಹಳ್ಳಿಯ ಹೇಮಾವತಿ ವಾಟರ್ ಸಪ್ಲೈ ಬಡಾವಣೆಯಲ್ಲಿ ನೀರು ನುಗ್ಗಿ ಹತ್ತಕ್ಕೂ ಹೆಚ್ಚು ಮನೆಗಳು ಜಲಾವೃತವಾಗಿದೆ.. ಕಾಮಾಕ್ಯ ಲೇಔಟ್ನಲ್ಲಿ 20-30 ಮನೆಗಳಿಗೆ