ಇಷ್ಟು ದಿನ ಲಾಸ್ ನಲ್ಲಿದ್ದ ಬಿಎಂಟಿಸಿ ಸಂಸ್ಥೆ ಈಗ ಮತ್ತಷ್ಟು ಸಂಕಷ್ಟಕ್ಕೀಡಾಗಿದೆ. ಬಸ್ ಗಳಿಗೆ ಹಾಕ್ತಿರೋ ಡಿಸೇಲ್ ಗೂ ಪರಿತಪಿಸೋ ದುಸ್ಥಿತಿ ಬಂದಿದೆ. ಬಿಎಂಟಿಸಿ ಬಸ್ ಗಳ ಡಿಪೋಗಳಲ್ಲಿದ್ದ ಡಿಸೇಲ್ ಖಾಲಿಯಾಗ್ತಿದ್ದು, ಖಾಸಗೀ ಬಂಕ್ ಗಳ ಮುಂದೆ ಸಾಲುಗಟ್ಟಿ ಬಿಬಿಎಂಟಿಸಿ ಬಸ್ ಗಳು ಕ್ಯೂ ನಿಲ್ತಿವೆ. ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ನಿಗಮಪತ್ರ ಬರೆದಿದ್ದು, ಇನ್ನೈದಾರು ದಿನಕ್ಕೆ ಸಾಕಾಗುವಷ್ಟು ಇಂಧನ ಮಾತ್ರ ಬಿಎಂಟಿಸಿ ನಿಗಮದ ಬಳಿ ಇದೆ. ಬೆಂಗಳೂರು ಜನರ ಜೀವನಾಡಿ ಅಂದ್ರೆ, ಅದು ಬಿಎಂಟಿಸಿ ಬಸ್ ಗಳು. ಈಗಾಗಲೇ 746 ಕೋಟಿ ನಷ್ಟದಲ್ಲಿರುವ ಬಿಎಂಟಿಸಿ ಸಂಸ್ಥೆಗೆ ಈಗ ಡಿಸೇಲ್ ಅಭಾವ ಕೂಡ ಶುರುವಾಗಿದೆ. ಚಿಲ್ಲರೆ ಬೆಲೆಗೆ ಡಿಸೇಲ್ ಪೂರೈಕೆಗೆ ಹೆಚ್ ಪಿ ಸಿ ಎಲ್ ನಿರಾಕರಣೆ ಮಾಡಿರುವುದರಿಂದ ಬಂಕ್ಗಳಲ್ಲೇ ಬಿಎಂಟಿಸಿ ಬಸ್ಗಳಿಗೆ ಡೀಸೆಲ್ ಹಾಕಿಸುವ ದುಸ್ಥಿತಿ ಬಂದಿದೆ. ಹೀಗಾಗೀ ಬಿಎಂಟಿಸಿ ಬಸ್ ಗಳು ಡಿಸೇಲ್ ಹಾಕಿಸಿಕೊಳ್ಳಲು ನಗರದ ವಿವಿಧ ಬಂಕ್ ಮುಂದೆ ಸಾಲುಗಟ್ಟಿ ನಿಲ್ಲುತ್ತಿವೆ. ಸಾಮಾನ್ಯ ವಾಹನಗಳಂತೆ ಬಿಎಂಟಿಸಿ ಬಸ್ ಗಳು ಡಿಸೇಲ್ ಹಾಕಿಸಿಕೊಳ್ಳುವುದರಿಂದ ಸಿಟಿಜನರಿಗೆ ಬಿಎಂಟಿಸಿ ಬಸ್ ಸಂಚಾರ ನಿಂತು ಬಿಡುತ್ತಾ ಅನ್ನೋ ಭಯ ಶುರುವಾಗಿದೆ. ಹೀಗಾಗಿ ಎಚ್ಚೇತ್ತ ಬಿಎಂಟಿಸಿ ಸಂಸ್ಥೆ ಸುದ್ದಿಗೋಷ್ಠಿ ನಡೆಸಿ ಇದಕ್ಕೆ ಕಾರಣ ಏನು ಅಂತಾ ತಿಳಿಸಿದ್ರು.