ರೇಷ್ಮೆ ಗೂಡಿನ ದರ ಕಡಿಮೆಯಾಗಿದ್ದಕ್ಕೆ ಗದಗ ಜಿಲ್ಲೆ ಶಿರಹಟ್ಟಿ ತಾಲೂಕಿನ ರೇಷ್ಮೆ ಬೆಳೆಗಾರರು ಪ್ರತಿಭಟನೆ ಹಾದಿ ತುಳಿದಿದ್ದಾರೆ. ಉತ್ತರ ಕರ್ನಾಟಕದ ರೇಷ್ಮೆ ಬೆಳೆಗಾರರಿಗೆ ಇಪ್ಪತ್ತೈದು ವರ್ಷದಿಂದ ಅರವತ್ತು ರೂಪಾಯಿಯಂತೆ ಪ್ರೋತ್ಸಾಹ ಧನ ನೀಡಲಾಗುತ್ತಿತ್ತು. ಆದರೆ ಅದನ್ನು ಈಗ ಹತ್ತು ರೂಪಾಯಿಯಂತೆ ಬಹಳ ಕನಿಷ್ಟ ಬೆಲೆಗೆ ಇಳಿಕೆ ಮಾಡಿದ್ದಾರೆ. ಇದರಿಂದ ಯಾವುದೇ ಸೌಲಭ್ಯವಿಲ್ಲದ ರೇಷ್ಮೆ ಬೆಳೆಗಾರರು ತುಂಬಾ ಸಂಕಷ್ಟಕ್ಕೀಡಾಗುತ್ತಿದ್ದಾರೆ ಅಂತಾ ಬೇಸರ ವ್ಯಕ್ತಪಡಿಸಿದ್ರು. ಅಲ್ಲದೇ ರೇಷ್ಮೆ ಬೆಳೆಹಾನಿ ಮುಂದುವರಿಕೆ, ಸಂಕಷ್ಟ ಪರಿಹಾರ