ಮುಸ್ಲಿಮರ ಪವಿತ್ರ ಹಜ್ ಯಾತ್ರೆಗೆ ಇನ್ನುಮುಂದೆ ಮಹಿಳೆಯರು ಪುರುಷರ ಜೊತೆಯಲ್ಲೇ ಹೋಗಬೇಕೆಂಬ ನಿಯಮವಿಲ್ಲ. ಮಹಿಳೆಯರು ಏಕಾಂಗಿಯಾಗಿ ಅಥವಾ ಮಹಿಳೆಯರ ಜೊತೆಯಲ್ಲೇ ಹಜ್ ಯಾತ್ರೆಗೆ ಹೋಗಲು ಅವಕಾಶ ನೀಡಲಾಗಿದೆ. ಸೌದಿ ಅರೇಬಿಯಾದ ಪ್ರಧಾನಿಯಾಗಿರುವ ಮಹಾರಾಜ ಮೊಹಮ್ಮದ್ ಬಿನ್ ಸಲ್ಮಾನ್ ಈ ನಿಟ್ಟಿನಲ್ಲಿ ಮಹತ್ವದ ಬದಲಾವಣೆಗಳನ್ನು ತಂದಿದ್ದಾರೆ. ಹಜ್ ಇಸ್ಲಾಂ ಧರ್ಮದ 5 ಸ್ತಂಭಗಳಲ್ಲಿ ಒಂದಾಗಿದೆ. ಜೀವನದಲ್ಲಿ ಒಮ್ಮೆಯಾದರೂ ಹಜ್ ಯಾತ್ರೆಗೆ ತೆರಳಬೇಕೆಂದು ಮುಸ್ಲಿಮರು ಬಯಸುತ್ತಾರೆ. ಇದುವರೆಗೂ ಹಜ್ ಯಾತ್ರೆಗೆ ತೆರಳುವ ಮಹಿಳೆಯರ