ಹಿರಿಯ ಪತ್ರಕರ್ತೆ, ವಿಚಾರವಾದಿ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಅವರ ಸಹೋದರ ಇಂದ್ರಜಿತ್ ಲಂಕೇಶ್ನನ್ನು ತನಿಖೆಗೊಳಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಕಳೆದ 2006ರಲ್ಲಿ ಇಂದ್ರಜಿತ್ ಲಂಕೇಶ್, ತಮ್ಮ ಸಹೋದರಿ ಗೌರಿ ಲಂಕೇಶ್ಗೆ ರಿವಾಲ್ವರ್ ತೋರಿಸಿ ಬೆದರಿಸಿದ್ದರು. ತದನಂತರ ಗೌರಿ ಲಂಕೇಶ್ ಪೊಲೀಸ್ ಠಾಣೆಗೆ ಸಹೋದರನ ವಿರುದ್ಧ ದಾಖಲಿಸಿದ್ದರು. ಆಕೆಗೆ ರಿವಾಲ್ವರ್ ತೋರಿಸಿದ ಪ್ರಕರಣದ ನಂತರ ಅಕ್ಕನ ಜೊತೆ ನನ್ನ ಸಂಬಂಧ ಉತ್ತಮವಾಗಿತ್ತು. ನಾವು ಪರಸ್ಪರ ಪ್ರೀತಿಯಿಂದಲೇ ಇದ್ದೇವೆ