ಹಿರಿಯ ಪತ್ರಕರ್ತೆ ಗೌರಿ ಲಂಕೇಶ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕೆ ವ್ಯಕ್ತವಾದವರನ್ನ ಎಸ್`ಐಟಿ ಅಧಿಕಾರಿಗಳು ತನಿಖೆಗೆ ಒಳಪಡಿಸುತ್ತಿದ್ದಾರೆ. ಇವತ್ತು ರೌಡಿ ಶೀಟರ್ ಕುಣಿಗಲ್ ಗಿರಿಯನ್ನ ತನಿಖೆಗೆ ಒಳಪಡಿಸಿದ್ದಾರೆಂದು ವರದಿಯಾಗಿದೆ. ಗೌರಿ ಲಂಕೇಶ್ ಹತ್ಯೆಯಾದ ದಿನ ಕುಣಿಗಲ್ ಗಿರಿ ರಾಮನಗರ ಜೈಲಿನಲ್ಲಿದ್ದರು. ನಿನ್ನೆ ಬಿಡುಗಡೆಯಾಗಿದ್ದಾರೆ. ಆದರೆ, ಕುಣಿಗಲ್ ಗಿರಿ ಸಹಚರರ ಮೇಲಿನ ಶಂಕೆ ಹಿನ್ನೆಲೆಯಲ್ಲಿ ಎಸ್`ಐಟಿ ಕುಣಿಗಲ್ ಗಿರಿ ಕುರಿತಂತೆ ಮಾಹಿತಿ ಸಂಗ್ರಹಕ್ಕೆ ಮುಂದಾಗಿತ್ತು. ಈ ಬಗ್ಗೆ ಮಾಧ್ಯಮಗಳಲ್ಲಿ ವರದಿ ಬಂದದನ್ನ