ಗೌರಿ ಲಂಕೇಶ್ ತನಿಖೆಯನ್ನ ತೀವ್ರಗೊಳಿಸಿರುವ ಎಸ್ಐಟಿ ಅಧಿಕಾರಿಗಳು ಇದೀಗ ಆಪರೇಶನ್ 150 ಡಿಟೆಸ್ ಐ ಆರಂಭಿಸಿದ್ದಾರೆ. ಹೌದು, ಗೌರಿ ಹಂತಕರು ಈ ಬ್ರ್ಯಾಂಡ್`ನ ಪಲ್ಸಾರ್ ಬೈಕಿನಲ್ಲಿ ಹೋಗಿರುವ ಮಾತಿ ಹಿಸಿಕ್ಕಿದ್ದು, ರಾಜ್ಯಾದ್ಯಂತ 150 ತಂಡಗಳು ಹುಡುಕಾಟದಲ್ಲಿ ತೊಡಗಿವೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಕಾಕ್ ಟೈಲ್ ರೆಡ್ ವೈನ್ ಬಣ್ಣದ ಪಲ್ಸಾರ್ ಬಣ್ಣದ ಬೈಕಿನಲ್ಲಿ ಹಂತಕರು ಪರಾರಿಯಾಗಿದ್ದು, ಬೈಕ್ ಯಾರ ಹೆಸರಿನಲ್ಲಿದೆ. ಖರೀದಿಸಿದವರ್ಯಾರು..? ಖರೀದಿಸದವರ ಬಳಿಯೇ ಇದೆಯಾ..? ಮತ್ಯಾರಿಗಾದರೂ ಮಾರಿದ್ದಾರಾ..?