ಬೆಂಗಳೂರು : ಮೊಟ್ಟೆ ಬೇಕಿದ್ರೆ ಇನ್ನೂ ನಾಲ್ಕು ಹೊಡೆಯಿರಿ, ಆದರೆ ಜನರನ್ನು ನೆಮ್ಮದಿಯಿಂದ ಬದುಕಲು ಬಿಡಿ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆಗ್ರಹಿಸಿದ್ದಾರೆ.ಬೆಂಗಳೂರಿನಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ವಿರೋಧ ಪಕ್ಷದ ನಾಯಕರು. ಹಳ್ಳಿಗೆ ಹೋಗೋದು, ಜನರ ಸಮಸ್ಯೆ ಕೇಳೋದು ಅವರ ಕರ್ತವ್ಯ. ಹಾಗೆ ಹೋದಾಗ ಕಲ್ಲು, ಮೊಟ್ಟೆ ಹೊಡೀತಾರೆ ಅಂದ್ರೆ ಅವರ ಮನಸ್ಥಿತಿ ಹೇಗಿರಬೇಕು ಎಂದು ಪ್ರಶ್ನಿಸಿದ್ದಾರೆ.ಕೊಡಗಿಗೆ ಯಾವುದೇ ಬಂಡವಾಳ ಹರಿದು ಹೋಗುತ್ತಿಲ್ಲ. ಕೇವಲ ಪ್ರವಾಸೋದ್ಯಮದಿಂದ ಅಲ್ಲಿನ