ಒಂದೇ ದಿನ ಜಿಲ್ಲೆಯಲ್ಲಿ ಆರು ಕೊರೊನಾ ಪಾಸಿಟಿವ್ ಕೇಸ್ ಗಳು ದೃಢಪಟ್ಟಿರುವುದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ. ದಾವಣಗೆರೆಯಲ್ಲಿ ಒಂದೇ ದಿನ ಆರು ಕೊರೋನಾ ಪ್ರಕರಣಗಳು ದೃಢಪಟ್ಟಿವೆ.ರೋಗಿ ಸಂಖ್ಯೆ 533 ರ ಪ್ರಾಥಮಿಕ ಸಂಪರ್ಕದಿಂದ ಆಕೆಯ 16 ವರುಷದ ಮಗ ಮತ್ತು ರೋಗಿ ಸಂಖ್ಯೆ 556 ರ ಪ್ರಾಥಮಿಕ ಸಂಪರ್ಕದಿಂದ ಮೂವರು ಸೊಸೆಯರು, ಓರ್ವ ಮಗ ಮತ್ತು ಒಂದು ವರ್ಷದ ಮೊಮ್ಮಗನಿಗೆ ಸೋಂಕು ಇರುವುದು ದೃಢಪಟ್ಟಿದೆ ಎಂದು ಜಿಲ್ಲಾಧಿಕಾರಿ ಮಹಾಂತೇಶ ಬೀಳಗಿ