ಕೋಲಾರ ಜಿಲ್ಲೆಯಲ್ಲಿ ಹಸುಗಳಿಗೆ ಚರ್ಮ ಗಂಟುರೋಗ ಉಲ್ಬಣಗೊಂಡಿದ್ದು, ಬಂಗಾರಪೇಟೆ ತಾಲೂಕಿನ ಪಚ್ಚಾರ್ಲಹಳ್ಳಿ ಗ್ರಾಮದಲ್ಲಿ ಶಂಕಿತ ಸೋಂಕಿಗೆ ಮೂರು ರಾಸುಗಳು ಬಲಿಯಾಗಿದೆ, ಇದುವರೆಗೆ ಜಿಲ್ಲೆಯಲ್ಲಿ 950 ಕ್ಕು ಹೆಚ್ಚು ಹಸುಗಳಲ್ಲಿ ರೋಗದ ಲಕ್ಷಣಗಳು ಕಂಡುಬಂದಿದ್ದು, ರೋಗಕ್ಕೆ ಸೂಕ್ತ ಲಸಿಕೆ ಲಭ್ಯವಿಲ್ಲದಿದ್ದರು, ಸರ್ಕಾರ ನೀಡಿರುವ ಲಸಿಕೆಯಿಂದಲೇ ರೋಗ ಹತೋಟಿಗೆ ಬರಲಿದೆ ಎಂದು ಪಶು ಇಲಾಖೆ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ, ಕೋಲಾರ ಜಿಲ್ಲೆಯಲ್ಲಿ ಎರಡೂವರೆ ಲಕ್ಷಕ್ಕೂ ಅಧಿಕ ಹಸುಗಳಿದ್ದು, ಇದರಲ್ಲಿ ಒಂದೂವರೆ ಲಕ್ಷದಷ್ಟು ಹಸುಗಳಿಗೆ