ಚಿಕ್ಕಮಗಳೂರು: ಉಪಸಭಾಪತಿ ಎಸ್ ಎಲ್ ಧರ್ಮೇಗೌಡರು ಆತ್ಮಹತ್ಯೆ ಮಾಡಿಕೊಂಡಿದ್ದು ಜನಶತಾಬ್ಧಿ ರೈಲಿಗೆ ನೇರ ನಿಂತು ಎಂದು ಸ್ವತಃ ರೈಲಿನ ಚಾಲಕರು ಸಾಕ್ಷ್ಯ ನುಡಿದಿದ್ದಾರೆ.ಸೋಮವಾರ ರಾತ್ರಿ ಜನಶತಾಬ್ಧಿ ರೈಲಿಗೆ ತಲೆ ಕೊಟ್ಟು ಅವರು ಆತ್ಮಹತ್ಯೆ ಮಾಡಿರುವುದು ರೈಲ್ವೇ ಚಾಲಕನ ಮಾಹಿತಿಯಿಂದ ಖಚಿತವಾಗಿದೆ. ಸೋಮವಾರ ರಾತ್ರಿ ಕಡೂರು ಸಮೀಪ ಗುಣಸಾಗರ ಗ್ರಾಮದ ಬಳಿ ಹೋಗುತ್ತಿದ್ದ ವೇಳೆ ಸುಮಾರು 7 ಗಂಟೆ ಹೊತ್ತಿಗೆ ಬಿಳಿ ಬಟ್ಟೆ ಧರಿಸಿದ್ದ ವ್ಯಕ್ತಿ ರೈಲ್ವೆ ಹಳಿ ಮೇಲೆ ನಿಂತಿದ್ದರು.