ಬಿಜೆಪಿ ಪಕ್ಷ ಸೋತ ಬಳಿಕ ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್ ಸಂತೋಷ್ ವಿರುದ್ಧ ಕೆಲವರು ಟೀಕಾ ಪ್ರಹಾರ ನಡೆಸಿದ್ರು.. ಕೆಲವರು ಸೋಶಿಯಲ್ ಮಿಡಿಯಾದಲ್ಲಿ ಸಂತೋಷ್ ಕಾಲೆಳೆದಿದ್ರು. ಇದಕ್ಕೆ ಮಾಜಿ ಸಚಿವ C.N ಅಶ್ವತ್ಥ್ ನಾರಾಯಣ್ ಕಿಡಿಕಾರಿದ್ದಾರೆ. ಈ ಕುರಿತು ಟ್ವೀಟ್ ಮಾಡಿರುವ ಅವರು, ಭಾರತೀಯ ಜನತಾ ಪಾರ್ಟಿಯ ಗೆಲುವಿಗಾಗಿ ಹಗಲಿರುಳು ಶ್ರಮಿಸುತ್ತಿರುವವರು B.L ಸಂತೋಷ್.. ಅವರು ನಮ್ಮ ಪಕ್ಷದ ಅಸಂಖ್ಯ ಕಾರ್ಯಕರ್ತರನ್ನು ಅಣಿಗೊಳಿಸುವಲ್ಲಿ ಬಹುಮುಖ್ಯ ಪಾತ್ರ ವಹಿಸುತ್ತಿರುವವರಲ್ಲಿ ಒಬ್ಬರು..