ನನ್ನೊಂದಿಗೆ ಮಲಗದಿದ್ರೆ ಕೆಲಸದಿಂದ ವಜಾ: ಮಹಿಳಾ ಉದ್ಯೋಗಿಗೆ ಬೆದರಿಕೆ.

ಬೆಂಗಳೂರು| Rajesh patil| Last Modified ಶನಿವಾರ, 6 ಜನವರಿ 2018 (16:42 IST)
ನನ್ನೊಂದಿಗೆ ಮಲಗದಿದ್ರೆ ಕೆಲಸದಿಂದ ವಜಾಗೊಳಿಸುವುದಾಗಿ ಕಾಮುಕ ಅಧಿಕಾರಿಯೊಬ್ಬ ಮಹಿಳಾ ಉದ್ಯೋಗಿಗೆ ಕಿರುಕುಳ ನೀಡಿದ ಹೇಯ ಘಟನೆ ವರದಿಯಾಗಿದೆ.
ಇಂದಿರಾ ಕ್ಯಾಂಟಿನ್‌ನಲ್ಲಿ ಉದ್ಯೋಗಿಯಾಗಿರುವ ಮಹಿಳೆಗೆ, ಮೇಲಾಧಿಕಾರಿ ಸತೀಶ್ ಎಂಬಾತ ಪ್ರತಿನಿತ್ಯ ಕರೆ ಮಾಡಿ ನನ್ನೊಂದಿಗೆ ಸೆಕ್ಸ್‌ಗಾಗಿ ಸಹಕರಿಸಿ ಅನೈತಿಕ ಸಂಬಂಧ ಹೊಂದದಿದ್ದಲ್ಲಿ ಕೆಲಸದಿಂದ ವಜಾಗೊಳಿಸುವುದಾಗಿ ಬೆದರಿಕೆಯೊಡ್ಡಿದ್ದಾನೆ ಎಂದು ಮಹಿಳೆ ದೂರು ನೀಡಿದ್ದಾಳೆ
 
ಕಾಮುಕ ಅಧಿಕಾರಿ, ರಾತ್ರಿ ಕಂಠಪೂರ್ತಿ ಕುಡಿದು ಮಹಿಳಾ ಉದ್ಯೋಗಿಯ ಮೊಬೈಲ್‌ಗೆ ಕರೆ ಮಾಡುವುದಲ್ಲದೇ ಅಸಭ್ಯ ಪದಗಳನ್ನು ಬಳಸಿದ್ದಲ್ಲದೇ ಅಸಹ್ಯ ಸಂದೇಶಗಳನ್ನು ರವಾನಿಸಿದ್ದಾನೆ ಎಂದು ಮಹಿಳೆ ದೂರಿನಲ್ಲಿ ತಿಳಿಸಿದ್ದಾಳೆ.
 
ಕಾಮುಕ ಮೇಲಾಧಿಕಾರಿ ಸತೀಶ್ ವಿರುದ್ಧ ಬಂಡೇಪಾಳ್ಯ ಪೊಲೀಸ್ ಠಾಣೆಯಲ್ಲಿ ಮಹಿಳೆ ಪ್ರಕರಣ ದಾಖಲಿಸಿದ್ದಾಳೆ. ಮಹಿಳೆಯ ಪತಿಗೂ ಕರೆ ಮಾಡಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.
 
ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿರುವುದು ತಿಳಿಯುತ್ತಿದ್ದಂತೆ ಆರೋಪಿ ಸತೀಶ್ ಪರಾರಿಯಾಗಿದ್ದಾನೆ ಎನ್ನಲಾಗಿದೆ. ಶೀಘ್ರದಲ್ಲಿ ಆರೋಪಿಯನ್ನು ಬಂಧಿಸಲಾಗುವುದು ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
ತಾಜಾ ಸುದ್ದಿಗಳನ್ನು ಓದಲು ವೆಬ್‌ದುನಿಯಾ ಮೊಬೈಲ್ ಆ್ಯಪ್ ಡೌನ್‍ಲೋಡ್ ಮಾಡಿಕೊಳ್ಳಿ. ಇದರಲ್ಲಿ ಇನ್ನಷ್ಟು ಓದಿ :