ಗೆಳೆಯನ ಪತ್ನಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದವನು ಮಾಡಬಾರದ ಕೆಲಸ ಮಾಡಿದ್ದಾನೆ. ತನ್ನ ಅಕ್ರಮ ಸಂಬಂಧಕ್ಕೆ ಗೆಳೆಯ ಶಿವಾನಂದ ಅಡ್ಡಿಯಾಗುತ್ತಾನೆ ಎಂದು ಆತನಿಗೆ ಕಂಠಪೂರ್ತಿ ಮದ್ಯ ಕುಡಿಸಿ ಕೊಲೆಮಾಡಿದ್ದನು ಯಲ್ಲಪ್ಪ.ಶಿವಾನಂದನ ಪತ್ನಿ ಅನ್ನಪೂರ್ಣ ಜೊತೆಗೆ ಅನೈತಿಕ ಸಂಬಂಧ ಹೊಂದಿದ್ದ ಯಲ್ಲಪ್ಪ ತನ್ನ ಗೆಳೆಯ ಎನ್ನುವುದನ್ನೂ ನೋಡದೇ ಕೊಲೆ ಮಾಡಿದ್ದಾನೆ ಎನ್ನಲಾಗಿದೆ. ಶವವನ್ನು ರಸ್ತೆ ಬದಿ ಎಸೆದು ಹೋಗಿದ್ದ. ಹಾವೇರಿಯ ಶಿಗ್ಗಾವಿ ತಾಲೂಕಿನಲ್ಲಿ ಈ ಘಟನೆ ನಡೆದಿದ್ದು, ಶಿವಾನಂದ ಧಾರವಾಡ ಮೂಲದ