ಬೆಂಗಳೂರು: ಕಾಂಗ್ರೆಸ್ ತೊರೆದು ಬಿಜೆಪಿಗೆ ಸೇರ್ಪಡೆಯಾಗುತ್ತಿರುವ ಮಾಜಿ ಮುಖ್ಯಮಂತ್ರಿ ಎಸ್ ಎಂ ಕೃಷ್ಣ ಮನೆಯಲ್ಲೀಗ ಸೂತಕದ ಛಾಯೆ. ಕಾರಣ, ಕೃಷ್ಣ ಸಹೋದರಿ ಸುನೀತಾ ನಿನ್ನೆ ರಾತ್ರಿ ನಿಧನರಾಗಿದ್ದಾರೆ. ಎಲ್ಲಾ ಸರಿಯಾಗಿದ್ದರೆ, ಇಂದು ಕೃಷ್ಣ ದೆಹಲಿಯಲ್ಲಿ ಬಿಜೆಪಿ ವರಿಷ್ಠರ ಸಮ್ಮುಖದಲ್ಲಿ ಬಿಜೆಪಿಗೆ ಸೇರ್ಪಡೆಯಾಗಬೇಕಿತ್ತು. ಅದಕ್ಕಾಗಿ ನಿನ್ನೆಯೇ ಅವರು ದೆಹಲಿಯಲ್ಲಿ ಬೀಡುಬಿಟ್ಟಿದ್ದರು. ಆದರೆ ನಿನ್ನೆ ರಾತ್ರಿ ಸಹೋದರಿ ಅಗಲಿದ ಸುದ್ದಿ ಕೇಳಿದ ತಕ್ಷಣ ಅವರು ರಾಜ್ಯಕ್ಕೆ ಮರಳಿದ್ದಾರೆ.ಹಾಗಾಗಿ ಬಿಜೆಪಿ ಸೇರ್ಪಡೆ ಗಳಿಗೆ