ಆಹಾರ ಹುಡುಕುತ್ತಾ ಕಾಡಿನಿಂದ ನಾಡಿಗೆ ಬಂದ ನಾಗರ ಹಾವು ಮನೆಯೊಂದಕ್ಕೆ ಎಂಟ್ರಿ ಕೊಟ್ಟಿದೆ. ಒಂದು ಕೋಳಿಯನ್ನ ಸಾಯಿಸಿ, ನಾಲ್ಕು ಕೋಳಿ ಮೊಟ್ಟೆಯನ್ನ ನುಂಗಿ ಗಂಟಲಿನಲ್ಲಿ ಸಿಕ್ಕಿ ಹಾಕಿಕೊಂಡು ಸಾವು ಬದುಕಿನೊಂದಿಗೆ ನರಳಾಟ ಅನುಭವಿಸಿರುವ ಘಟನೆ ಚಿಕ್ಕಮಗಳೂರು ಜಿಲ್ಲೆ ಮೂಡಿಗೆರೆ ತಾಲೂಕಿನ ಬಣಕಲ್ ಸಮೀಪದ ಚೇಗು ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹರೀಶ್ ಎಂಬುವರ ಮನೆಗೆ ಎಂಟ್ರಿ ನೀಡಿದ ನಾಗರಾಜ ಕೋಳಿಯನ್ನು ಸಾಯಿಸಿ ನಾಲ್ಕು ಮೊಟ್ಟೆಯನ್ನ ನುಂಗಿದೆ. ತನ್ನ ಗಂಟಲಿನಲ್ಲಿ ನಾಲ್ಕು ಮೊಟ್ಟೆಗಳು