ಪ್ರತಿ ಸೆಕೆಂಡಿಗೆ ಬಾಹ್ಯಾಕಾಶದಲ್ಲಿ ಲೆಕ್ಕವಿಲ್ಲದಷ್ಟು ಚಲನೆಗಳು ನಡೆಯುತ್ತಲೇ ಇರುತ್ತವೆ. ಇವುಗಳಲ್ಲಿ ಕೆಲವನ್ನು ಸಂಶೋಧನೆಯ ಮೂಲಕ ದಾಖಲಿಸಬಹುದು. ಕೆಲವು ದಾಖಲಿಸಲು ತುಂಬಾ ಕಷ್ಟ. ನಮ್ಮ ಸೌರವ್ಯೂಹದ ಮಧ್ಯಭಾಗದಲ್ಲಿರುವ ಸೂರ್ಯನಲ್ಲಿ ಇತ್ತೀಚೆಗೆ ಅಂತಹ ದೊಡ್ಡ ಘಟನೆ ಕಂಡುಬಂದಿದೆ. ಪ್ರತಿ ಕ್ಷಣವೂ ಸೂರ್ಯನೊಳಗೆ ಸರಣಿ ಸ್ಫೋಟಗಳು ನಡೆಯುತ್ತಿವೆ. ಇದು ಸೂರ್ಯನ ಚಲನೆಗೆ ಪ್ರಮುಖ ಕಾರಣವಾಗಿದೆ. ಯುರೋಪಿಯನ್ ಸ್ಪೇಸ್ ಏಜೆನ್ಸಿ ಅಚ್ಚರಿಗೊಳಿಸುವ ವೀಡಿಯೊವನ್ನು ಬಿಡುಗಡೆ ಮಾಡಿದೆ. ಈ ವಿಡಿಯೋದಲ್ಲಿ ಸೂರ್ಯನಲ್ಲಿ ಹಾವು ಹರಿದಾಡುತ್ತಿರುವಂತೆ ಕಾಣುತ್ತದೆ. ಇವೆಲ್ಲದರ