ದೇಶ ಹಾಳು ಮಾಡೋಕೆ ಅಂತಾನೆ ಸೋಷಿಯಲ್ ಮೀಡಿಯಾಗಳು ಹುಟ್ಟಿಕೊಂಡಿವೆ. ಹೀಗಂತ ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಕಿಡಿಕಾರಿದ್ದಾರೆ.ವಿಶ್ವಾಸ ಮತ ಯಾಚನೆ ಸಂದರ್ಭ ನಡೆದ ಚರ್ಚೆಯಲ್ಲಿ ಮಾತನಾಡಿರೋ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ, ಸೋಷಿಯಲ್ ಮೀಡಿಯಾಗಳ ಹಾವಳಿ ವಿಪರೀತವಾಗಿದೆ. ಅವುಗಳಿಗೆ ಕಡಿವಾಣ ಬೀಳುತ್ತಿಲ್ಲ. ರಾಜ್ಯ ಸರಕಾರ ಆಡಳಿತಕ್ಕೆ ಬಂದ ಮೊದಲ ದಿನದಿಂದಲೂ ಈವರೆಗೆ ಅಪಪ್ರಚಾರದಲ್ಲಿ ತೊಡಗಿವೆ ಎಂದು ದೂರಿದರು.ನೈತಿಕತೆಯನ್ನು ಮರೆತಿರುವ ಸೋಷಿಯಲ್ ಮೀಡಿಯಾಗಳು ಭವಿಷ್ಯ ಹೇಳುವಂತೆ ಸುಳ್ಳು ಸುದ್ದಿಗಳನ್ನು ಪ್ರಕಟ ಮಾಡಲು ಆತುರ ತೋರುತ್ತಿವೆ ಎಂದು