Widgets Magazine

ಕುಮಾರಸ್ವಾಮಿ ಅದೃಷ್ಟದಿಂದ ಸಿಎಂ ಆದವರು- ಸಚಿವ ಸೋಮಣ್ಣ ಕಿಡಿ

ಮೈಸೂರು| pavithra| Last Modified ಶುಕ್ರವಾರ, 13 ಸೆಪ್ಟಂಬರ್ 2019 (10:49 IST)
ಮೈಸೂರು : 14 ತಿಂಗಳು ಹೆಚ್ ಡಿ ಕೆ ಯಾವ ರೀತಿ ಅಧಿಕಾರ ಮಾಡಿದ್ರು ಎಂದು ಚಾಮುಂಡೇಶ್ವರಿ ಮುಂದೆ ನಿಂತು ಅದರ ಬಗ್ಗೆ ಯೋಚಿಸಲಿ  ಎಂದು ಮಾಜಿ ಸಿಎಂ ಹೆಚ್.ಡಿ. ಕುಮಾರಸ್ವಾಮಿ ವಿರುದ್ಧ ಸಚಿವ ವಾಗ್ದಾಳಿ ನಡೆಸಿದ್ದಾರೆ.
‘ನಾನು ಎಲ್ ಬೋರ್ಡ್ ಅಲ್ಲ. ಕಲಿಕೆ ನಿರಂತರವಾಗಿರುತ್ತದೆ. ದಸರಾ ಹಿನ್ನಲೆ ನಾನು ಎಲ್ಲ ತಾಲೂಕುಗಳಿಗೂ ಹೋಗಿದ್ದೇನೆ. ಮಾಜಿ ಸಚಿವ ಜಿಟಿ ದೇವೇಗೌಡರು ಪ್ರಭಾವಿ ನಾಯಕರು. ಆದ್ರೆ ಇಲ್ಲಿ ಯಾರೂ ಯಾರಿಗೂ ದೊಡ್ಡವರಲ್ಲ’ ಎಂದು ಅವರು ಕಿಡಿಕಾರಿದ್ದಾರೆ.


ಹಾಗೇ ‘ದಸರಾ ಆಚರಣೆ ಬಗ್ಗೆ ಹೆಚ್.ಡಿ.ಕೆ. ಬಳಿ ಸಲಹೆಗಳಿದ್ರೆ ಕೊಡಲಿ. ಹೆಚ್ ಡಿ ಕುಮಾರಸ್ವಾಮಿ ರಾಜಕರಣಕ್ಕೆ ಬಂದಿದ್ದು, 1996ರಲ್ಲಿ. ನಾನು ರಾಜಕಾರಣಕ್ಕೆ ಬಂದದ್ದು 1983ರಲ್ಲಿ. ಕುಮಾರಸ್ವಾಮಿ ಅದೃಷ್ಟದಿಂದ ಸಿಎಂ ಆದವರು. ಯಾರ ಅಪ್ಪನ ಮನೆಯ ಸ್ವತ್ತೂ ಅಲ್ಲ’ ಎಂದು ಕುಮಾರಸ್ವಾಮಿಗೆ ಟಾಂಗ್ ನೀಡಿದ್ದಾರೆ.

ಇದರಲ್ಲಿ ಇನ್ನಷ್ಟು ಓದಿ :