ಕೇಂದ್ರ ಗೃಹ ಸಚಿವ ಅಮಿತ್ ಷಾ ವರುಣಾದಲ್ಲಿ ಸೋಮಣ್ಣ ಗೆಲ್ಲಿಸಿ ದೊಡ್ಡ ವ್ಯಕ್ತಿ ಮಾಡುತ್ತೇವೆ ಅಂದರು. ಇದನ್ನು ಕೇಳಿಸಿಕೊಂಡ ಕೆಲವರು ನನಗೆ ಬಗಣಿಗೂಟ ಇಟ್ಟರು ಎಂದು ಮಾಜಿ ಸಚಿವ ವಿ. ಸೋಮಣ್ಣ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಚಾಮರಾಜನಗರದ ಬಿಜೆಪಿ ಕಚೇರಿಯಲ್ಲಿ ನಡೆಯುತ್ತಿರುವ ಕೃತಜ್ಞತಾ ಸಭೆಯಲ್ಲಿ ಅವರು ಮಾತನಾಡಿದರು. ಜಿಲ್ಲಾಧ್ಯಕ್ಷ ಇವತ್ತಿಂದ ನಿಮ್ಮ ಪೆನ್ನು ಪೇಪರ್ ಕೆಲಸ ಮಾಡಲಿ. ಪಕ್ಷ ವಿರೋಧಿ ಚಟುವಟಿಕೆ ಮಾಡಿದವರನ್ನು ಕಿತ್ತು ಹಾಕಲಿ ಎಂದು ಚಾಮರಾಜನಗರ ಕ್ಷೇತ್ರ ಸೋಲಿನ ಕುರಿತು