ಚಿಕ್ಕಮಗಳೂರು: ಕುಡಿದ ಮತ್ತಿನಲ್ಲಿ ಅತ್ತೆಯನ್ನು ಪೊರಕೆಯಲ್ಲಿ ಹೊಡೆದು ಅಳಿಯ ಸಾಯಿಸಿದ ಘಟನೆ ಚಿಕ್ಕಮಗಳೂರಿನಲ್ಲಿ ನಡೆದಿದೆ.60 ವರ್ಷದ ಕಾಳಮ್ಮ ಎಂಬವರನ್ನು 35 ವರ್ಷದ ಅಳಿಯ ರಮೇಶ್ ಕೊಲೆ ಮಾಡಿದ್ದಾನೆ. ಸದಾ ತಿರುಗಾಡಿಕೊಂಡಿರುತ್ತಿದ್ದ ರಮೇಶ್ ಭಾನುವಾರ ಮನೆಗೆ ಬಂದಿದ್ದ. ಈ ವೇಳೆ ಅತ್ತೆ ಜೊತೆ ಜಗಳವಾಗಿದೆ.ಸಂಜೆ ಆತ ಮದ್ಯದ ಬಾಟಲಿ ತಂದಿದ್ದ. ಮನೆಯವರೆಲ್ಲರೂ ಕುಡಿದ ಮತ್ತಿನಲ್ಲಿ ಜಗಳವಾಡಿಕೊಂಡಿದ್ದಾರೆ. ಪೊರಕೆಯಲ್ಲಿ ಹೊಡೆದ ಪರಿಣಾಮ ಕಾಳಮ್ಮನ ತಲೆ ಮತ್ತು ಕುತ್ತಿಗೆಗೆ ಗಾಯವಾಗಿದೆ. ಹಲ್ಲೆ ನಡೆಸಿದ ಬಳಿಕ