ಬೆಂಗಳೂರು: ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವಾಯ್ತು ಎಂಬ ಗಾದೆಯಿದೆ. ಆದರೆ ಇಲ್ಲಿ ಅತ್ತೆ ಬಲಿಯಾಗಿದ್ದಾರೆ.ಗಂಡನ ಕುಡಿತದ ಚಟದಿಂದ ಬೇಸತ್ತ ಹೆಂಡತಿ ತವರು ಮನೆ ಸೇರಿದ್ದಳು. ಆದರೆ ತವರು ಮನೆಯಿಂದ ಪತ್ನಿಯನ್ನು ಕರೆತರಲು ಬಂದ ಗಂಡ ಜಗಳವಾಡಿದ್ದಾನೆ. ಈ ವೇಳೆ ಅತ್ತೆ ಮೇಲೆ ಕೋಪಗೊಂಡು ಸುತ್ತಿಗೆಯಿಂದ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದಾನೆ. ಪರಿಣಾಮ ಅತ್ತೆ ಸಾವನ್ನಪ್ಪಿದ್ದಾಳೆ.ಕಳೆದ ಮೂರು ವರ್ಷಗಳಿಂದ ತವರು ಮನೆಯಲ್ಲಿದ್ದ ಪತ್ನಿ ವಿಚ್ಛೇದನಕ್ಕೆ ಸಿದ್ಧವಾಗಿದ್ದಳು. ಇದೇ ಆಕ್ರೋಶದಲ್ಲಿ ಕುಡಿದು ಪತ್ನಿಯ