ಚಿಕ್ಕಮಗಳೂರು: ಹಣ ಕೇಳಿದಾಗ ತಂದೆ ನೀಡಿಲ್ಲವೆಂದು ಮಗನೇ ತಂದೆಯನ್ನು ಬರ್ಬರವಾಗಿ ಕೊಂದ ಘಟನೆ ಚಿಕ್ಕಮಗಳೂರಿನ ಚನ್ನಡ್ಲುವಿನಲ್ಲಿ ನಡೆದಿದೆ. ಸುಂದರ ಪೂಜಾರಿ ಮೃತಪಟ್ಟ ವ್ಯಕ್ತಿ. ಇವರು ಪಾರ್ಶಾವಾಯುವಿನಿದ್ದ ಪೀಡಿತರಾಗಿದ್ದರು. ಹಿರಿಯ ಮಗ ನಿಕೇಶ್ ಬೆಂಗಳೂರಿನಲ್ಲಿ ವಾಸವಿದ್ದ. ಕೊರೊನಾ ಕಾರಣದಿಂದ ಊರಿಗೆ ಬಂದವನು ಆಗಾಗ ತಂದೆ-ತಾಯಿಯ ಬಳಿ ಹಣಕ್ಕಾಗಿ ಪೀಡಿಸುತ್ತಿದ್ದ.ಸುಂದರ ಪೂಜಾರಿಯವರು ಹಣ ಕೊಡಲು ನಿರಾಕರಿಸಿದ್ದಕ್ಕೆ ತಂದೆಯ ಮೇಲೆ ಹಲ್ಲೆ ಮಾಡಿದ್ದಾನೆ.ಇದರಿಂದ ಗಂಭೀರವಾಗಿ ಗಾಯಗೊಂಡ ಸುಂದರ ಪೂಜಾರಿಯನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.