ಚಿಕ್ಕಮಗಳೂರು : ಬುದ್ಧಿಮಾತು ಹೇಳಿದ್ದಕ್ಕೆ ಮಗನೊಬ್ಬ ಹೆತ್ತ ತಾಯಿಯನ್ನು ಹೊಡೆದು ಕೊಲೆ ಮಾಡಿದ ಘಟನೆ ಚಿಕ್ಕಮಗಳೂರು ಜಿಲ್ಲೆ ಶೃಂಗೇರಿ ತಾಲೂಕಿನ ಹೊಕಳಿ ಗ್ರಾಮದಲ್ಲಿ ನಡೆದಿದೆ. ಸಾಕಮ್ಮ(55) ಕೊಲೆಯಾದ ಮಹಿಳೆ. ನಂದೀಶ್ ತಾಯಿಯನ್ನು ಕೊಂದ ಮಗ. ಈತನಿಗೆ ತಾಯಿ ಮನೆಯಲ್ಲಿ ಇರಬೇಡ. ಕೆಲಸಕ್ಕೆ ಹೋಗಿ ದುಡಿಯುವಂತೆ ಬುದ್ಧಿವಾದ ಹೇಳಿದ್ದಾಳೆ. ತಾಯಿ ಹಾಗೇ ಹೇಳಿದ್ದಕ್ಕೆ ಕೋಪಗೊಂಡ ಮಗ ನಂದೀಶ್ ದೊಣ್ಣೆಯಿಂದ ತಾಯಿಗೆ ಹೊಡೆದಿದ್ದಾನೆ. ತೀವ್ರ ರಕ್ತಸ್ರಾವದಿಂದ ತಾಯಿ ಸಾಕಮ್ಮ ಸ್ಥಳದಲ್ಲೆ ಮೃತಪಟ್ಟಿದ್ದಾಳೆ. ಈ