ಮಗನೇ, ತಂದೆಯನ್ನು ಚೂರಿಯಿಂದ ಚುಚ್ಚಿ ಕೊಲೆಗೈಯ್ದ ಘಟನೆ ಗದಗ ತಾಲೂಕಿನ ಹಾತಲಗೇರಿ ಗ್ರಾಮದಲ್ಲಿ ನಡೆದಿದೆ. 55 ವರ್ಷದ ಭರಮಪ್ಪ ದೊಡ್ಡಮನೆ ಎನ್ನುವ ವ್ಯಕ್ತಿಯೇ ಮಗನಿಂದ ಕೊಲೆಯಾಗಿದ್ದಾನೆ. ಪುತ್ರ ಸುರೇಶ್ ದೊಡ್ಡಮನೆ ಕೊಲೆ ಆರೋಪಿಯಾಗಿದ್ದಾನೆ. ಸದ್ಯ ತಲೆ ಮರಿಸಿಕೊಂಡಿರುವ ಆರೋಪಿ ಸುರೇಶನ ಶೋಧಕ್ಕಾಗಿ ಪೊಲೀಸರು ಬಲೆ ಬೀಸಿದ್ದಾರೆ. ಮನೆ ಯಜಮಾನನನ್ನು ಕಳೆದುಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಮದ್ವೆಯಾದಾಗಿನಿಂದ ಸುರೇಶ ಕುಡಿತದ ದಾಸ ಆಗಿದ್ದನಂತೆ ಯಾರು ಕುಡಿಸುತ್ತಾರೋ ಅವರ ಬಳಿ ಕೆಲಸಕ್ಕೆ